ಭ್ರಷ್ಟಾಚಾರದಲ್ಲಿ ಮುಳುಗಿರುವ ಕಳಂಕಿತ ದರ್ಗಾ ಸಮಿತಿಗೆ ಅಭಯಾಸ್ತ ನೀಡುತ್ತಿರುವ ಸಚಿವ ಕಾದರ್
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಳಂಕಿತ ದರ್ಗಾ ಸಮಿತಿಗೆ ಅಭಯಾಸ್ತ ನೀಡುತ್ತಿರುವ ಸಚಿವ ಕಾದರ್
ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ಈಗ ಸರ್ವಾಧಿಕಾರದ ಮೂಲಕ ಆಡಳಿತ ನಡೆಸುತ್ತಿರುವ ಸಮಿತಿಯವರ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಹೊಸ ಮದರಸ ಪುಸ್ತಕದ ಮೂಲಕ ಲಕ್ಷಾಂತರ ಹಣ ಗುಳುಂ ಮಾಡಿದ್ದಾರೆ. ಅದೇ ತರಹ ಅಲ್ಲಿಗೆ ಬರುವ ನೇರ್ಚೆ ಹಣಗಳನ್ನು ತಮಗೆ ಸಹಾಯ ಮಾಡುವ ರೌಡಿಗಳಿಗೆ ಹಫ್ತ ಕೊಡುತ್ತಿದ್ದಾರೆ. ಇದರ ವೀಡಿಯೋ ಸಹಾ ಇದೆ. 🎥
ಆದರೆ ವಿಪರ್ಯಾಸ ವೆಂದರೆ ನಮ್ಮ ಸರಕಾರ ಮಾತ್ರ ಯಾವುದೇ ರೀತಿಯ ತನಿಖೆ ನಡೆಸುತ್ತಿಲ್ಲ. 😷😷🤐
ಇದಲ್ಲದೇ ಇವರು ಹೊರತಂದ ಹೊಸ ಮದರಸ ಪುಸ್ತಕದ ವಿಷಯವಾಗಿ ಈಗಲೂ ಉಳ್ಳಾಲದ ಹಲವು ಮೊಹಲ್ಲಾಗಳಲ್ಲಿ ಗೊಂದಲದ ವಾತಾವರಣ ಇದೆ. ಅಷ್ಟೇ ಅಲ್ಲದೇ ಇವರು ಹೊರತಂದ ಪುಸ್ತಕ ಅದು ಕಾನೂನು ಬಾಹಿರ, ಹಳೆಯ ಕಾಲದಿಂದಲೂ ಕಲಿಸಿಕೊಂಡು ಬರುತ್ತಿರುವ ಮದರಸ ಪುಸ್ತಕವನ್ನೇ ಮುಂದುವರಿಸ ಬೇಕೆಂದು ಮಾನ್ಯ ಹೈಕೋರ್ಟ್ ಆದೇಶ ಕೂಡಾ ನೀಡಿದೆ.
ಅದೇ ತರಹ ಈಗ ಇರುವ ಸಮಿತಿಯು ಉಳ್ಳಾಲದ ಹಲವು ಮೊಹಲ್ಲಾಗಳಲ್ಲಿ ನ್ಯಾಯಯುತವಾಗಿ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ವಿನಾಕಾರಣ ವಜಾಗೊಳಿಸಿ, ಸರ್ವಾಧಿಕಾರದ ಮೂಲಕ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಇದರ ಬಗ್ಗೆ ಮಾನ್ಯ ಕರ್ನಾಟಕ ವಕ್ಫ್ ಸಮಿತಿಯು ಪರಿಶೀಲನೆ ಮಾಡಿ, ಈಗಿರುವ ಸಮಿತಿಯನ್ನು ಬರ್ಕಾಸ್ತು ಮಾಡಿ, ಉಳ್ಳಾಲದ ಎಲ್ಲಾ ಮೊಹಲ್ಲಾಗಳಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದೆ.
ಹೀಗೆ ಮಾನ್ಯ ಹೈಕೋರ್ಟ್ ಹಾಗೂ ಕರ್ನಾಟಕ ವಕ್ಫ್ ಬೋರ್ಡ್ ನ ಆದೇಶ ಬಂದರೂ, ನಮ್ಮ ದಕ್ಷಿಣ ಕನ್ನಡದ ವಕ್ಫ್ ಸಮಿತಿ ಹಾಗೂ ಜಿಲ್ಲಾಡಳಿತ ಯಾವುದೇ ರೀತಿಯ ಆಕ್ಷನ್ ತೆಗೆಯುತ್ತಿಲ್ಲ.😡🤷♂🤷♂
ಇದರ ಕಾರಣವೇನೆಂದು ಜಾಲಾಡಿಸಿ ನೋಡುವಾಗ ಸಿಕ್ಕಿದ ವಿಷಯ, ನಮ್ಮ ಸಚಿವ ಕಾದರ್ ರವರು ಅವರಿಗೆ ಯಾವುದೇ ರೀತಿಯ ಆಕ್ಷನ್ ತೆಗೆಯಬೇಡಿ, ಎಲ್ಲಾ ನಾನು ಸರಿ ಮಾಡುತ್ತೇನೆ ಅಂತ ಹೇಳಿ, ಈ ಕಳಂಕಿತ ದರ್ಗಾ ಸಮಿತಿಗೆ ತನ್ನ ಅಭಯಾಸ್ತ ನೀಡಿದ್ದಾರೆ..
ಏನಾದರೂ ಈ ದರ್ಗಾ ಸಮಿತಿಯಲ್ಲಿರುವ ಅವರ ಪಕ್ಷದ ನಾಯಕರಲ್ಲವೇ, ಸಹಾಯ ಹಸ್ತ ನೀಡದೇ ಇರುತ್ತಾರಾ??? ಚುನಾವಣೆ ಹತ್ತಿರ ಇದೆ ಅಲ್ವಾ!!!
ಇದೆಲ್ಲಾ ಒಂದು ಕಡೆ ತೆರೆಮರೆಯಲ್ಲಿ ನಡೆಯುತ್ತಿರುವ ವಿಷಯ. ಆದರೆ ಈಗ ನಮ್ಮ ಸಚಿವರು ತಮ್ಮ ಚೇಲಾಗಳ ಹೊಟ್ಟೆ ತುಂಬಿಸಲು ಮತ್ತೆ ಸರಕಾರದ ಅಡಿಯಲ್ಲಿ ಕೋಟ್ಯಾಂತರ ರೂಪಾಯಿಯ ಯೋಜನೆ ಯೊಂದನ್ನು ಬಿಡುಗಡೆ ಮಾಡಲು ಹಲವು ಮಂತ್ರಿಗಳ ಬಳಿ ಈ ಕಳಂಕಿತ ಸಮಿತಿಯನ್ನು ಕರೆದುಕೊಂಡು ಹೋಗುತ್ತಿದ್ದಾರೆ
ಅಲ್ಲಿ ಬರುವ ನೇರ್ಚೆ ಹಣವನ್ನು ಗುಳುಂ ಮಾಡುವ ಈ ಕಳಂಕಿತ ಸಮಿತಿ, ಇನ್ನು ಸರಕಾರದ ಖಜಾನೆ ಬಿಡುತ್ತಾರಾ
ಆದ್ದರಿಂದ ಜನರೇ ಇನ್ನಾದರೂ ಎಚ್ಚೆತ್ತುಕೊಳ್ಳಿ, ಈ ರಾಜಕೀಯ ಪುಡಾರಿಗಳಿಂದ ನಮ್ಮೆಲ್ಲರ ಆಸರೆಯಾದ ದರ್ಗಾವನ್ನು ಉಳಿಸುವ
ಯಾರಿಗಾದರೂ ಈ ಮೇಲೆ ತಿಳಿಸಿದ ವಿಷಯದ ಬಗ್ಗೆ ಸಂಶಯ ಇದ್ದರೆ, ಸರಕಾರ ಲೋಕಾಯುಕ್ತ ಅಥವಾ ಎಸಿಬಿ ಯ ಮೂಲಕ ನಿಷ್ಪಕ್ಷವಾಗಿ ತನಿಖೆ ನಡೆಸಲಿ.
ನಮ್ಮ ಬಳಿ ಇವರು ನಡೆಸಿದ ಎಲ್ಲಾ ಭ್ರಷ್ಟಾಚಾರದ ಸಾಕ್ಷಗಳಿವೆ. ಇನ್ನು ಕೆಲವೇ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕೈಗೆ ಒಪ್ಪಿಸಲಿದ್ದೇವೆ.
*RTI ಕಾರ್ಯಕರ್ತ ಉಳ್ಳಾಲ*
Comments
Post a Comment