Posts

Showing posts from July, 2017

ಉಳ್ಳಾಲದ ಅಳೇಕಲ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿಸಲಾಯಿತು.

Image
ಉಳ್ಳಾಲದ ಅಳೇಕಲ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿಸಲಾಯಿತು.

ಉಳ್ಳಾಲ ದರ್ಗಾ ಸ್ವಯಂ ಘೋಷಿತ ಅಧ್ಯಕ್ಷನ ಮೇಲೆ ಕ್ರಿಮಿನಲ್ ಮೊಕದ್ದಮೆ

ಉಳ್ಳಾಲ ದರ್ಗಾ ಸ್ವಯಂ ಘೋಷಿತ ಅಧ್ಯಕ್ಷನ ಮೇಲೆ ಕ್ರಿಮಿನಲ್ ಮೊಕದ್ದಮೆ *ಸುಳ್ಳುಗಳ ಸರದಾರರಿಂದ ಮತ್ತೊಮ್ಮೆ ಮಾಧ್ಯಮದ ಮುಂದೆ ಸುಳ್ಳು ಹೇಳಿಕೆ!!* ಇವತ್ತು ಉಳ್ಳಾಲದ ದರ್ಗಾದ ಸ್ವಯಂ ಘೋಷಿತ ಅಧ್ಯಕ್ಷರಿಂದ ನಡೆದ ಒಂದು ಪ್ರೆಸ್ ಮೀಟ್ ರಿಪೋರ್ಟ್ ಓದಿದೆ. ಮೋದಿ ಮಾಧ್ಯಮದ ಮುಂದೆ ಹೇಗೆ ಸರಾಗವಾಗಿ ಸುಳ್ಳು ಹೇಳುತ್ತಾರೆ, ಇವರು ಕೂಡ ಹಾಗೆಯೇ ಸುಳ್ಳುಗಳ ಸರಮಾಲೆಯನ್ನೇ ಬಿಟ್ಟಿದ್ದಾರೆ. *ಇವರು ನ್ಯಾಯಯುತವಾಗಿ ಬೈಲಾ ಪ್ರಕಾರ ಆಯ್ಕೆ ಆದದ್ದಂತೆ??* ಇದಕ್ಕಿಂತ ದೊಡ್ಡ ಸುಳ್ಳು ಬೇಕೆ?? *ಬೈಲಾ ಅಂದರೆ ಏನಂತ ಇವರಿಗೆ ಗೊತ್ತಾ?? ಈಗ ಇರುವ ಆಡಳಿತ ಸಮಿತಿಯಲ್ಲಿ ಎಷ್ಟು ಜನ ಬೈಲಾ ಪ್ರಕಾರ ಬಂದವರು?* *೧. ಈ ಸ್ವಯಂ ಘೋಷಿಸಿತ ಅಧ್ಯಕ್ಷ, 2010 ರಲ್ಲಿ ಕನಚೂರು ಮೋನು ಹಾಜಿ ಇರುವಾಗ 50000 ರೂಪಾಯಿ ಗೋಲ್ ಮಾಲ್ ಮಾಡಿ, ಮಹಾಸಭೆಯಲ್ಲಿ ಸಿಕ್ಕಿ ಬಿದ್ದು,  ೧೦ ವರ್ಷ ಇವರಿಗೆ ಆಡಳಿತ ಸಮಿತಿಯಿಂದ ನಿಷೇಧ ಹೇರಲಾಗಿತ್ತು. ಅದು ಈಗ ಕೂಡಾ ರೆಗ್ಯೂಲೇಷನ್ ನಲ್ಲಿ ಇದೆ.* *೨. ಇದೇ ರಶೀದ್ ಎಂಬವರು 2011 ರಲ್ಲಿ ಉಳ್ಳಾಲ ದರ್ಗಾದ ರೆಗ್ಯೂಲೇಷನ್ ಬುಕ್ ಹರಿದಿದ್ದರು. ದರ್ಗಾ ಸಮಿತಿ ಇವರ ಮೇಲೆ ಕೇಸ್ ಮಾಡಿದ್ದಾರೆ.* *ಉಳ್ಳಾಲ ದರ್ಗಾ ಬೈಲಾ ಪ್ರಕಾರ, ದರ್ಗಾ ಸಮಿತಿ ಯಾರದರೂ ಒಬ್ಬರ ಮೇಲೆ ಕೇಸ್ ಮಾಡಿದರೆ, ಅಥವಾ ಯಾರಾದರೂ ದರ್ಗಾದ ಮೇಲೆ ಕೇಸ್ ಮಾಡಿದರೆ, ಅವರನ್ನು ಸಮಿತಿಗೆ ಆಯ್ಕೆ ಮಾಡುವಂತೆ ಇಲ್ಲ. ಅಂತವರ ಆಯ್ಕೆ ಬೈಲಾ ಪ್ರಕಾರ ಅಸಿಂಧು.* *ಅದೇ ತರಹ ಈಗಿನ ಆಡಳಿತ

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ದ್ವಿಮುಖ ನೀತಿ

Image
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ದ್ವಿಮುಖ ನೀತಿ     *ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾದ 4 ಜನ ಪದಾಧಿಕಾರಿಗಳ ಮೇಲೆ ಕೇಸ್ ಇದೆ ಅಂತ ಹೇಳಿ ಅವರನ್ನು ವಜಾ ಮಾಡಿದೆ.  ಆದರೆ ಈಗ ಉಳ್ಳಾಲ ದರ್ಗಾದ ಅಧ್ಯಕ್ಷರ ಹಾಗೂ ಇತರ ಪ್ರಮುಖ ಸದಸ್ಯರ ಮೇಲೆ ಅದಕ್ಕಿಂತ ಹೆಚ್ಚಿನ ಪ್ರಮಾಣದ ಕ್ರಿಮಿನಲ್ ಮೊಕದ್ದಮೆ ಇರುವಾಗ ಯಾಕೆ ವಜಾ ಮಾಡುತ್ತಿಲ್ಲ???* *ಕಾಜೂರಿನವರಿಗೆ ಒಂದು ಕಾನೂನು, ಉಳ್ಳಾಲದ ಕಾಂಗ್ರೆಸ್ ಮುಖಂಡರಿಗೆ ಇನ್ನೊಂದು ಕಾನೂನು ಇದೆಯೇ??*  *ಅಥವಾ ಮಂತ್ರಿಗಳು ಆಕ್ಷನ್ ತೆಗೆಯಲು ಬಿಡುತ್ತಿಲ್ಲವೇ?*     *ಹನೀಫ್,  RTI ಕಾರ್ಯಕರ್ತ,  ಉಳ್ಳಾಲ*

ಸೆಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮದ್ರಸ ವಿದ್ಯಾರ್ಥಿಗಳ ‘ನೋ ಚೇಂಜಸ್ ಇನ್ ಇಲ್ಮ್’ ಸಂಗಮ

Image
ಉಳ್ಳಾಲ : ಸೆಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮದ್ರಸ ವಿದ್ಯಾರ್ಥಿಗಳ ‘ನೋ ಚೇಂಜಸ್ ಇನ್ ಇಲ್ಮ್’ ಸಂಗಮವು ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ಜರಗಿತು. ಉಳ್ಳಾಲದಲ್ಲಿ ಪ್ರಸಕ್ತ ಪಠ್ಯಪುಸ್ತಕದಿಂದುಂಟಾಗಿರುವ ಗೊಂದಲದಿಂದಾಗಿ ಮದ್ರಸ ಪ್ರಾರಂಭವಾಗಿ 25 ದಿನ ಕಳೆದಿದ್ದರೂ, ಇನ್ನೂ ಪಠ್ಯ ಶುರುವಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಹೆತ್ತವರು ದಿನನಿತ್ಯ ಮದ್ರಸಕ್ಕೆ ಅಗಮಿಸುತ್ತಿದ್ದು, ಗೊಂದಲ ಮುಕ್ತ ಮಾಡಬೇಕಾದವರು ನಮ್ಮ ಹೆತ್ತವರನ್ನು ಮಾನಹಾನಿಯಾಗುವಂತೆ ಅಪಹಾಸ್ಯ ಮಾಡುವುದು, ನಮ್ಮ ಉಸ್ತಾದರುಗಳನ್ನು ಹೆಸರೆತ್ತಿ ಕರೆಯುವುದು ನಮಗೆ ಅತೀವ ದು:ಖವನ್ನುಂಟು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆತ್ತವರ ಕುರಿತು ನಿಂದಿನಾತ್ಮಕ ಸಂದೇಶಗಳನ್ನ ಹರಿಯ ಬಿಡುವುದನ್ನು ಕಾನೂನು ಪಾಲಕರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ನಿಂದನಾತ್ಮಕ ಧ್ವನಿ ಸಂದೇಶ ಹರಿಯಬಿಟ್ಟವರ ವಿರುಧ್ಧ ಆಡಳಿತ ಸಮಿತಿ ಕ್ರಮ ಕೈಗೊಳ್ಳಬೇಕು. ಆಡಳಿತ ಸಮಿತಿ ಮತ್ತು ನಮ್ಮ ಹೆತ್ತವರ ನಡುವೆ ತರ್ಕ ತಾರಕ್ಕೇರುತ್ತಿದ್ದು, ದಿನನಿತ್ಯ ನಾವು ಮದ್ರಸಗಳಲ್ಲಿ ಬೊಬ್ಬೆ, ಗಲಾಟೆಗಳನ್ನು ನೋಡಬೇಕಾಗಿದೆ. ನಾಗರಿಕರ ಮತ್ತು ಅಡಳಿತ ಸಮಿತಿಗಳ ವರ್ತನೆಯಿಂದಾಗಿ ನಮ್ಮ ಶಿಕ್ಷಕರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದು, ಇದು ಅವರು ಪಾಠ ಬೋಧನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಾವು ಮದರಸಾಗಳಲ್ಲಿ ಇಸ್ಲಾಮಿನ ಶರೀಯತ್ ಮತ್ತು ವಿಶ್ವಾಸವನ್ನು ಕಲಿಯಲು ಬರುತ್ತ

ಉಳ್ಳಾಲದಲ್ಲಿ ಮುಂದುವರಿದ ಗೊಂದಲ, ಕಮಿಟಿ ಸದಸ್ಯರ ನಡುವೆ ಮಾತಿನ ಚಕಮಕಿ

ಉಳ್ಳಾಲದಲ್ಲಿ ಮುಂದುವರಿದ ಗೊಂದಲ, ಕಮಿಟಿ ಸದಸ್ಯರ ನಡುವೆ ಮಾತಿನ ಚಕಮಕಿ *ಸ್ವಯಂ ಘೋಷಿತ ಅಧ್ಯಕ್ಷರ ಪಟಾಲ  ಖಾಝಿಯವರ ಬಳಿ ಹಾಗೂ ಕಮಿಟಿಯಲ್ಲಿ ಇರುವವರ ಅಭಿಪ್ರಾಯ ಕೇಳದೆ ಸರ್ವಾಧಿಕಾರದ ಮೂಲಕ ಹೊರ ತಂದ ಮದರಸ ಪುಸ್ತಕಕ್ಕೆ, ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ,  ಸಮಿತಿಯಲ್ಲಿ ಇರುವ ಹಲವು ಸದಸ್ಯರಿಂದ ಬಾರಿ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಹಲವು ಸದಸ್ಯರ ಮಧ್ಯೆ ದೊಡ್ಡ ವಾಗ್ವಾದ ನಡೆದಿದೆ.* *ಹಲವು ಸದಸ್ಯರು ಸ್ವಯಂ ಘೋಷಿತ ಉಪಾಧ್ಯಕ್ಷ ಆಗಿರುವ ಬಾವ ಮುಹಮ್ಮದ್ ಹಾಗೂ ಸೆಕ್ರೆಟರಿ  ಆದ ತ್ವಾಹ ಅವರನ್ನು ತರಾಟೆಗೆ ತೆಗೆದುಕೊಂಡರು. ಮೊದಲು ತಾವುಗಳು ತಾವು ಪ್ರತಿನಿಧಿಸುವ ಮೊಹಲ್ಲಾಗಳಲ್ಲಿ ಈ ಪುಸ್ತಕ ಕಾರ್ಯರೂಪಕ್ಕೆ ತನ್ನಿ ಆಮೇಲೆ ಉಳಿದ ಮೊಹಲ್ಲಾಗಳ ಬಗ್ಗೆ ಮಾತಾಡಿ ಅಂತ ಅವರಿಬ್ಬರನ್ನೂ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.* *ಬಾವ ಮುಹಮ್ಮದ್ ರವರ ಮೊಹಲ್ಲಾದಲ್ಲಿ ಇಬ್ರಾಹಿಂ ಹಾಜಿಯವರ ಕಾಲದಲ್ಲಿ ಇದ್ದ ಕಿತಾಬನ್ನೇ ಮಕ್ಕಳಿಗೆ ಓದಿಸುತ್ತಿದ್ದಾರೆ. ಅದೇ ತರಹ ಸೆಕ್ರೆಟರಿ ಅವರ ಊರಲ್ಲಿ ಇನ್ನೂ ಕಿತಾಬಿನ ಗೊಂದಲ ಮುಗಿದಿಲ್ಲ. ಹೀಗಿರುವಾಗ ಇವರು ಇತರ ಮೊಹಲ್ಲಾಗಳಲ್ಲಿ ಸರ್ವಾಧಿಕಾರದ ಮೂಲಕ ಪುಸ್ತಕ ನೀಡಲು ಪ್ರಯತ್ನಿಸುವುದನ್ನು ಹಲವು ಸದಸ್ಯರು ತೀವ್ರವಾಗಿ  ಖಂಡಿಸಿದರು.* 🎤💥💥👊

ಉಳ್ಳಾಲ ಕಿತಾಬ್ ಗೊಂದಲ, ಒಂದು ತಿಂಗಳ ಬಳಿಕ ಮದ್ರಸ ಪ್ರಾರಂಭದತ್ತ, ಮದನಿನಗರ ಹಾಗು ಮಾರ್ಗತಲೆಯಿಂದ ಚಾಲನೆ, ತಾಜುಲ್ ಉಲಮಾ ಖ.ಸಿ ಹಾಗು ಮಾಜಿ ಉಳ್ಳಾಲ ದರ್ಗಾ ಅಧ್ಯಕ್ಷ ಮರ್ಹೂಮ್ ಇಬ್ರಾಹಿಂ ಹಾಜಿಯವರ ಕಾಲದಿಂದ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬುಗಳು ವಿತರಣೆ

Image
ಉಳ್ಳಾಲದ ಮಾರ್ಗತಲೆ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿಸಲಾಯಿತು.

ಉಳ್ಳಾಲದಲ್ಲಿ ಶಾಂತಿ ನಿರ್ಮಾಣಕ್ಕೆ ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸ ಪಟ್ಟಾಂಬಿ ಉಸ್ತಾದರ ಕರೆ

Image
ಉಳ್ಳಾಲದಲ್ಲಿ ಶಾಂತಿ ನಿರ್ಮಾಣಕ್ಕೆ ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸ ಪಟ್ಟಾಂಬಿ ಉಸ್ತಾದರ ಕರೆ *ಉಳ್ಳಾಲದ ಅಳೇಕಲ ಜುಮಾ ಮಸೀದಿಯಲ್ಲಿ ಕಳೆದ 35 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ, ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸರಲ್ಲಿ ಒಬ್ಬರಾದ ಅವರು,  ಜುಮಾ ನಮಾಝ್ ಬಳಿಕ ಮಾತನಾಡಿ, ಉಳ್ಳಾಲದಲ್ಲಿ ಈಗ ನಡೆಯುತ್ತಿರುವ ಗೊಂದಲಮಯ ವಾತಾವರಣಕ್ಕೆ ಮುಖ್ಯ ಕಾರಣ ನಮ್ಮ ಬಹುಮಾನ್ಯರಾದ ಖಾಝಿಯವರ ಮಾತು ಕೇಳದೇ, ಅವರನ್ನು ದಿಕ್ಕರಿಸಿ ಹೋಗುವುದಾಗಿದೆ.!* *ಊರಿನಲ್ಲಿ ಯಾವುದೇ ಪ್ರಶ್ನೆ ಬಂದರೂ, ಅದು ಕಿತಾಬಿನ ವಿಷಯ ಆಗಲಿ, ಪೆರ್ನಾಳ್ ಚಂದ್ರ ದರ್ಶನ ಅಥವಾ ಬೇರೆ ಏನೇ ಆಗಲಿ, ಖಾಝಿಯವರು ಏನು ಹೇಳುತ್ತಾರೆ ಅದನ್ನು ಸ್ವೀಕರಿಸುವುದು ಇಸ್ಲಾಂನ ನಿಯಮ. ಅದು ಬಿಟ್ಟು ಯಾರೋ ಕೆಲವು ಅವಿವೇಕಿಗಳು ಹೇಳುವುದನ್ನು ಕೇಳಿ, ಖಾಝಿಯವರನ್ನು ದಿಕ್ಕರಿಸಿ ಅವರ ಹಿಂದೆ ಹೋದರೆ ನಾಶ ಕಂಡಿತಾ!!* *ಅಷ್ಟೇ ಅಲ್ಲ, ನಮ್ಮ ಊರಿನ ಖಾಝಿ ಅವರು ಒಬ್ಬರು ಸಯ್ಯದ್ ಕೂಡಾ ಹೌದು. ನಮ್ಮ ಮುತ್ತು ನೆಬಿ ಮುಹಮ್ಮದ್ ಮುಸ್ತಫಾ (ಸ.ಅ) ರು ಹೇಳಿದ್ದಾರೆ, "ನನ್ನ ಕುಟುಂಬ ಅದು ನೂಹ್ ನೆಬಿ(ಅ.ಸ) ರವರ ಹಡಗು ಇದ್ದ ಹಾಗೆ, ಅದನ್ನು ಯಾರು ಹಿಡಿದರೋ ಅವರು ರಕ್ಷೆ ಹೊಂದುವರು.!"* ಅದೇ ತರಹ ಯಾರು ಖಾಝಿಯ ಮಾತು ಸ್ವೀಕರಿಸಿದರೋ ಅವರು ವಿಜಯ ಹೊಂದುವರು. ಇನ್ನು ಯಾರು ಅವರನ್ನು ದಿಕ್ಕರಿಸಿ ಹೋದರೋ ಅವರಿಗೆ ನಾಶ ಕಂಡಿತಾ.! ಅಷ್ಟೇ ಅಲ್ಲ ಅಂತವರು  ಇಸ್ಲಾಮಿನಿಂದ ಹೊರ ಹೋಗುವ

ನೇರ್ಚೆ ಡಬ್ಬಿಯ ಬೀಗ ಒಡೆತ

Image
ಉಳ್ಳಾಲ ದರ್ಗಾದ ಸ್ವಘೋಷಿತ ಅಧ್ಯಕ್ಷನಾಗಿ ದಬ್ಬಾಳಿಕೆಯಿಂದ ಮಂಡಲ ರಶೀದ್ ಆಯ್ಕೆಯಾದ  ಸಂದರ್ಭದಲ್ಲಿ ಕಳಂಕಿತ ಆಡಳಿತ ಸಮಿತಿಯ ಸಮ್ಮುಖದಲ್ಲಿ ಹಣ ಲಪಟಾಯಿಸಲು ನೇರ್ಚೆ ಡಬ್ಬಿಯ ಬೀಗ ಒಡೆಯುವ ವಿವಿಧ ಭಂಗಿಗಳು .

ಉಳ್ಳಾಲ ದರ್ಗಾ ಕಳಂಕಿತ ಅಧ್ಯಕ್ಷ ಮಂಡಲ ರಶೀದ್ ವಿರುದ್ಧ ಕರ್ನಾಟಕದಾದ್ಯಂತ ಪ್ರತಿಭಟನೆ. ಇಂದು ದಾವಣಗೆರೆಯಲ್ಲಿ ನಡೆದ ಪ್ರತಿಭಟನೆ

Image
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ. ಪೋಲೀಸರು ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು ಆದರೆ ನಾವು ಛಲ ಬಿಡದೆ ಪ್ರತಿಭಟನೆಯನ್ನು ಮಾಡಿದೆವು.ಉಪಸ್ಥಿತಿ ಹಜರತ್ ಖ್ವಾಜ ಗರೀಬ್ ನವಾಜ್ ಸೇವ ಸಮಿತಿಯ ರಾಜ್ಯದ್ಯಕ್ಷರಾದ ಮೊಹಮ್ಮದ್ ಶಫೀ ಉಲ್ಲಾ, ರಾಜ್ಯ ನಿರ್ದೇಶಕರಾದ ಎಂ.ಕಲೀಂ ದಾವಣಗೆರೆ ಜಿಲ್ಲಾದ್ಯಕ್ಷರಾದ ಹಬೀಬ್ ಉಲ್ಲಾ ದರ್ವೇಶ್, ಬರ್ಕತ್.

18 ವರ್ಷಗಳಿಂದ ಕಡಪ್ಪರ ಜಾರ ಮಸೀದಿಯಲ್ಲಿ ನಡೆಯುತ್ತಿದ್ದ ಕುರಾನ್ ಕ್ಲಾಸನ್ನು ಬಂದು ಮಾಡಿದ ಮಂಡಲ ರಶೀದ್ ಹಾಗು ಸ್ವಘೋಷಿತ ಕಳಂಕಿತ ಉಳ್ಳಾಲ ದರ್ಗಾ ಆಡಳಿತ ಸಮಿತಿ

Image
ಉಳ್ಳಾಲದಲ್ಲಿ ಮುಂದುವರಿದ ಗೊಂದಲ ಮುಸ್ಲಿಂಮರ ಪವಿತ್ರ ಸ್ಥಳವಾದ ಫ್ಯಾಲೆಸ್ಥೀನ್ ನಲ್ಲಿರುವ ಮಸ್ಜಿದುಲ್ ಅಖ್ಶಾ ಗೆ ಬೀಗ ಜಡಿದಿರುವ ಯಹೂದಿಗಳಿಗೂ, ಇಲ್ಲಿ ಪೆರ್ನಾಳ್ ದಿವಸ ಬೀಗ ಜಡಿದ ಇವರಿಗೂ ಏನು ವ್ಯತ್ಯಾಸ ಇದೆ? ಇಸ್ಲಾಂನ ಪವಿತ್ರ ಗ್ರಂಥವಾದ ಖುರಾನ್ ನನ್ನು ನಿಂದಿಸುವವರಿಗೂ, ಅದೇ ಖುರಾನ್ ಕಲಿಯುವುದನ್ನು ಬಂದ್ ಮಾಡುವವರಿಗೂ ಏನಿದೆ ವ್ಯತ್ಯಾಸ? ವಿಷಯ ಏನೆಂದರೆ  ಉಳ್ಳಾಲದ ಕಡಪರ ಜಾರ ಎಂಬ ಸ್ಥಳದಲ್ಲಿ ಇರುವ ಮಸೀದಿಯಲ್ಲಿ ಕಳೆದ 17-18 ವರ್ಷಗಳಿಂದ  ಪಟ್ಲ ಫೈಝಿ ಉಸ್ತಾದರ  ನೇತ್ರತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದ, ಇಸ್ಲಾಮಿನ ಪವಿತ್ರ ಗ್ರಂಥವಾದ ವಿಶುದ್ದ ಖುರಾನ್ ಗ್ರಂಥದ ಬಗ್ಗೆ ಕಲಿಸಿ ಕೊಡುವ  ತರಗತಿಯನ್ನು ಈಗಿನ ದರ್ಗಾದ ಸ್ವಯಂ ಘೋಷಿತ ಅಧ್ಯಕ್ಷರ ಪಟ್ಟಾಲ  ಕ್ಯಾನ್ಸಲ್ ಮಾಡಿದೆ. ಭಾನುವಾರ ಬೆಳಿಗ್ಗೆ ನಡೆಸಿ ಕೊಂಡು ಬರುತ್ತಿದ್ದ ಈ ತರಗತಿ, ನಮ್ಮ ಊರಿನ ಮದರಸಕ್ಕೆ ಹೋಗದ ಹಲವಾರು ಹಿರಿಯರು ಇಲ್ಲಿ ಬಂದು ಕಲಿಯುತ್ತಿದ್ದರು. ಈಗ ಅದನ್ನು ಬಂದು ಮಾಡಿದ ದೀನ್ ಬಗ್ಗೆ ಅರಿವಿಲ್ಲದ ಈ ಸ್ವಯಂ ಘೋಷಿತ ಕಮಿಟಿ . ಇದು ಚಿಂತಿಸುವವರಿಗೆ ಮಾತ್ರ

MRM RSS ನಾಯಕರ ಜೊತೆ ಉಳ್ಳಾಲದ ಸ್ವಯಂ ಘೋಷಿತ ಅಧ್ಯಕ್ಷ ಮಂಡಲ ರಶೀದ್

Image
MRM RSS ನಾಯಕರ ಜೊತೆ ಉಳ್ಳಾಲದ ಸ್ವಯಂ ಘೋಷಿತ ಅಧ್ಯಕ್ಷ ಮಂಡಲ ರಶೀದ್

ಉಳ್ಲಾಲ ದರ್ಗದ ಅಧ್ಯಕ್ಷ ರಶೀದ್ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಉಪಾಧ್ಯಕ್ಷ ಕಬುರು ಮುಸ್ತಫಾ ಇವರ ವಿರುದ್ದ ದೊಂಬಿ, ಅಕ್ರಮ ಮನೆ ಪ್ರವೇಶ, ಕಿಡ್ನಾಪ್,ಸುಲಿಗೆ ಮುಂತಾದ ಗಂಭೀರ ಕ್ರಿಮಿನಲ್ ಮೊಕದ್ದಮೆ

Image
ಉಳ್ಲಾಲ ದರ್ಗದ ಅಧ್ಯಕ್ಷ ರಶೀದ್ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಉಪಾಧ್ಯಕ್ಷ ಕಬುರು ಮುಸ್ತಫಾ ಇವರ ವಿರುದ್ದ ದೊಂಬಿ, ಅಕ್ರಮ ಮನೆ ಪ್ರವೇಶ, ಕಿಡ್ನಾಪ್,ಸುಲಿಗೆ ಮುಂತಾದ ಗಂಭೀರ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರ ವನ್ನು ಉಳ್ಲಾಲದ ಜನತೆಗೆ ತಿಳಿಸಲು ಶಿವಮೊಗ್ಗ ಬೆಂಗಳೂರಿನವರು ಬರ ಬೇಕಾದದ್ದು ನಮ್ಮ ದೊಡ್ಡ ದುರಂತ.* ಈ ರೀತಿ ಕ್ರಿಮಿನಲ್ ಮೊಕದ್ದಮೆ ಹೊಂದಿದವರು ಅಧ್ಯಕ್ಷ ರಾಗಿ ಮುಂದುವರಿಯುವಂತಿಲ್ಲ ಎಂಬುದು ವಕ್ಫ಼್ ನಿಯಮ ಎಂಬ ವಿಚಾರವೂ ಉಳ್ಲಾಲದ ಜನರಿಗೆ ತಿಳಿದಿರಲಿಲ್ಲ..ಒಂದು ವೇಳೆ ಈ ವಿಚಾರ ಗೊತ್ತಿದ್ದರೆ ಈಗಾಗಲೇ ವಕ್ಫ಼್ ನ ಬಾಗಿಲನ್ನು ರಷೀದ್ ವಿರೋದಿಗಳು ಮಾಡುತಿದ್ದರು. ಇದೀಗ ದಾಖಲೆ ಸಮೇತ ದೂರನ್ನು ಮುಖ್ಯ ಮಂತ್ರಿಗಳಿಗೆ ನೀಡಲಾಗಿದೆ.ಇದು ಬಿಜೆಪಿ ಆರೆಸ್ಸಸ್ ಅಥವಾ ಎಮ್ ಅರ್ ಎಮ್ ತಂತ್ರ ಎಂದು ಹೇಳಿ ಅದ್ಯಕ್ಷ ಪಟ್ಟ ಉಳಿಸುಕೊಳ್ಲುವ ಪ್ರತಿತಂತ್ರ ರಶೀದ್ ತಂಡ ನಡೆಸುತ್ತಿದೆ.ಮಾತ್ರವಲ್ಲ ಇದನ್ನು ಪ್ರಶ್ನಿಸಿದವರು ಸಲಫಿ ಎಂದು ನ್ಯಾಯವಾದಿ ಎಸ್ ಎಸ್ ಖಾಜ಼ಿ ಬಗ್ಗೆನೂ ಹೇಳಿ ಕೊಳ್ಲುತ್ತಾ ಸುನ್ನಿಗಳನ್ನು ಭಾವನಾತ್ಮಕ ವಾಗಿ ಒಲಿಸಿಕೊಳ್ಲುವ ಪ್ರಯತ್ನವೂ ನಡೆಯುತ್ತಿದೆ. *ಅಸಲಿಗೆ ಎಸ್ ಎಸ್ ಖಾಜ಼ಿ ಎಂಬವರೇ ರಶೀದ್ ನ ಎದುರಾಳಿ ವಕೀಲ.*        *ಇದೀಗ ರಶೀದ್ ನೇತ್ರತ್ವದ ಆಡಳಿತ ಸಮಿತಿಯನ್ನು ಬರ್ಕಾಸ್ತು ಗೊಳಿಸಿ ಆಡಳಿತದಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿ 24 ರಂದು ಹೋರಾಟ ಸಮಿತಿ ಗುಲ್ಬರ್ಗದಿಂದ

ಎಪಿ ವಿಭಾಗ, "ಮಹಿಳೆಯರಿಂದ ಪ್ರತಿಭಟನೆ ಮಾಡಿಸಿತು" ಎಂದ "ದಾರಿಮಿ ಪುತ್ತೂರು" ರವರಿಗೆ ಪ್ರತಿಕ್ರಿಯೆ

Image
ಎಪಿ ವಿಭಾಗ, "ಮಹಿಳೆಯರಿಂದ ಪ್ರತಿಭಟನೆ ಮಾಡಿಸಿತು" ಎಂದ  "ದಾರಿಮಿ ಪುತ್ತೂರು" ರವರಿಗೆ ಪ್ರತಿಕ್ರಿಯೆ ಉಳ್ಳಾಲ ದಲ್ಲಿ ಮದರಸ ಪಠ್ಯ ಪುಸ್ತಕ ಬದಲಾವಣೆಗೆ ಸಂಬಂಧವಾಗಿ ಅಲ್ಲಿನ ಮಹಿಳೆಯರು ಪ್ರತಿಭಟನೆ ಮಾಡಿದ್ದನ್ನು  ಪ್ರಸ್ತಾವಿಸಿದ ದಾರಿಮಿ ಯೊಬ್ವರು, "ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡಬಾರದೆಂದು ಹೇಳಿ ಇದೀಗ ಸ್ವತಃ ಎಪಿ ವಿಭಾಗದವರೇ ಮಹಿಳೆಯರನ್ನು ಪ್ರತಿಭಟನೆ ಗಾಗಿ ಮದರಸಕ್ಕೆ ನುಗ್ಗಿಸಿದ್ದಾರೆ" ಎಂದು ಆರೋಪಿಸಿದ್ದಾರೆ. ಮಾನ್ಯ ದಾರಿಮಿ ಯವರೇ, ಮಹಿಳೆಯರನ್ನು ಬೀದಿಗಿಳಿಸಿ ಪ್ರತಿಭಟನೆ ಮಾಡಿಸುವುದನ್ನು ಎಪಿ ವಿಭಾಗ ಕಡಾಖಂಡಿತವಾಗಿ ವಿರೋಧಿಸುತ್ತಾ ಬಂದಿದೆ. ಸದ್ಯ ಮುಸ್ಲಿಮರಿಗೆ ನ್ಯಾಯಕ್ಕಾಗಿ ಮಹಿಳೆಯರನ್ನು ಬೀದಿಗಿಳಿಸುವ ಅಗತ್ಯವಿಲ್ಲ. ಬೇಕಾದಷ್ಟು  ಪುರುಷರು ನಮ್ಮಲ್ಲಿದ್ದಾರೆ. ಹಾಗಾಗಿ ನಾವು ಮಹಿಳೆಯರನ್ನು ಅನಾವಶ್ಯಕ ಪ್ರತಿಭಟನೆಗಾಗಿ ಬೀದಿಗಿಳಿಸುವುದನ್ನು ವಿರೋಧಿಸುತ್ತೇವೆ. ಇನ್ನು ಉಳ್ಳಾಲದಲ್ಲಿ ನಡೆದ ಘಟನೆಯೇ ಬೇರೆ. ತಮಗಾದ ಅನ್ಯಾಯವನ್ನು ಅಲ್ಲಿನ ಮಹಿಳೆಯರು ಸ್ವತಃ ಬಂದು ಕಮಿಟಿಯ ಮುಂದೆ ನಿವೇದನೆ ಮಾಡಿದ್ದಾರೆ ಅಷ್ಟೇ. ಇದು ಯಾವುದೊ ಸಂಘಟನೆ ಅನಾವಶ್ಯಕವಾಗಿ ಮಾಡಿಸಿದ ಪ್ರತಿಭಟನೆ ಅಲ್ಲ. ಇನ್ನು  ಈ ಘಟನೆಗೂ ಎಪಿ ವಿಭಾಗಕ್ಕೂ ಯಾವುದೇ ಸಂಬಂಧವಿಲ್ಲ. ಅದನ್ನು SSF ಆಗಲೀ, ಎಪಿ ವಿಭಾಗದ ಇತರ ಸಂಘಟನೆಗಳಾಗಲೀ ಆಯೋಜಿಸಿದ್ದಲ್ಲ. ಇನ್ನು ಅದನ್ನು ಎಪಿ ವಿಭಾಗ ಆಯೊಜಿಸಿತು ಎನ್ನಲು ಯ