ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ


ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ತಂಗಳ್ ರವರ ದುವಾಶೀರ್ವಾದದೊಂದಿಗೆ ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ ಉಳ್ಳಾಲ ದರ್ಗಾ ಬಳಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿನ  ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಉಳ್ಳಾಲ ಖಾಝಿಯನ್ನು ಧಿಕ್ಕರಿಸಿ ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರ ತಂದ ಪಠ್ಯಪುಸ್ತಕವನ್ನು ಕೆಲವು ಮೊಹಲ್ಲಾಗಳಿಗೆ ದಬ್ಬಾಳಿಕೆಯಿಂದ ವಿತರಿಸಿದ್ದು ಉಳ್ಳಾಲದಲ್ಲಿ ಗಲಭೆ ಭುಗಿಲೇಳಲು ನಿಮಿತ್ತವಾಗಿದ್ದು ಮಾತ್ರವಲ್ಲ ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ ಡಝನ್ ಗಟ್ಟಲೆ ತಪ್ಪುಗಳು, ಆಶಯ ವ್ಯತ್ಯಾಸಗಳು ಹಾಗು ಕುಂದು ಕೊರತೆಗಳು ವ್ಯಾಪಕವಾಗಿದ್ದು ಉಳ್ಳಾಲ ಸುನ್ನೀ ನಾಗರಿಕರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಬಹು PSM ಶಿಹಾಬುದ್ದೀನ್ ಸಖಾಫಿ ಮಾತನಾಡಿ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಎಳೆ ಎಳೆಯಾಗಿ ಉಳ್ಳಾಲ ಸುನ್ನಿ ನಾಗರಿಕರಿಗೆ, ವಿದ್ಯಾರ್ಥಿಗಳ ರಕ್ಷಕರಿಗೆ ಬಿಡಿಸಿ ಹೇಳಿದರು. ಇದೀಗ ಅಧಿಕ ಮೊಹಲ್ಲಾಗಳಲ್ಲೂ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಮರ್ಹೂಮ್ ಇಬ್ರಾಹಿಂ ಹಾಜಿ ಹಾಗು ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾದ ಕಿತಾಬುಗಳನ್ನು ಕಲಿಸಲಾಗುತ್ತಿದ್ದು, ಕೆಲವು ಮೊಹಲ್ಲಾಗಳಲ್ಲಿ ಉಳ್ಳಾಲ ದರ್ಗಾ ಅನಧಿಕ್ರತ ಸಮಿತಿ ದಬ್ಬಾಳಿಕೆಯಿಂದ ವಿತರಿಸಿದ ಹೊಸ ಪಾಠಪುಸ್ತಕದ ಕಾರಣದಿಂದ ಗಲಾಟೆ ಗದ್ದಲ, ಗೊಂದಲ ಏರ್ಪಟ್ಟಿದ್ದು ಈ ಕೆಲವು ಮದ್ರಸಾಗಳಲ್ಲಿ ಕಲಿಕೆ ಇನ್ನೂ ಪ್ರಾರಂಭವಾಗಿಲ್ಲ.


*__________________________________*


ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರತಂದ ಪುಸ್ತಕವನ್ನು ಸಂಪೂರ್ಣವಾಗಿ ಉಳ್ಳಾಲದ ಜನತೆ ತಿರಸ್ಕರಿಸಲು ಹಲವಾರು ಕಾರಣಗಳಿದ್ದರೂ ಪ್ರಮುಖ ಕೆಲವೊಂದು ಕಾರಣಗಳನ್ನು ಶಿಹಾಬುದ್ದೀನ್ ಸಖಾಫಿ ವಿವರಿಸಿದರು.


1- ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಕೂರತ್ ತಂಗಳ್ ರವರ ಅಂಗೀಕಾರ ಇಲ್ಲ.


2- ಕರ್ನಾಟಕ ಸರಕಾರದ ಆದೇಶಕ್ಜೆ ವಿರುದ್ಧ.


3- ಕರ್ನಾಟಕ ವಕ್ಫ್ ಮಂಡಳಿಯ ಆದೇಶಕ್ಕೆ ವಿರುದ್ಧ.


4- ಹೈಕೋರ್ಟ್ ಆದೇಶಕ್ಕೆ ವಿರುದ್ಧ.


5- ಉಳ್ಳಾಲ ಸುನ್ನೀ ಜನತೆಯ ಅಂಗೀಕಾರ ಇಲ್ಲ.


6- ಹೊಸ ಪುಸ್ತಕಕ್ಕೆ ವಿದ್ವಾಂಸರುಗಳು ಅಂಗೀಕಾರ ಇಲ್ಲ.


7- ಈ ಹೊಸ ಪುಸ್ತಕಕ್ಕೆ ಸಂಪಾದಕರು ಇಲ್ಲ. ಇನ್ನು ಈ ಪುಸ್ತಕ ಪಬ್ಲಿಶ್ ಮಾಡಿದ ದರ್ಗಾ ಸಮಿತಿಯಲ್ಲಿ ಯಾರಾದರೂ ಸಂಪಾದಕರಿರಬಹುದು ಎಂದು ಭಾವಿಸುವಂತಿಲ್ಲ. ಕಾರಣ ಈ ಹೊಸ ಪುಸ್ತಕ ಹೊರ ತಂದ ದರ್ಗಾ ಅನಧಿಕ್ರತ ಟ್ರಸ್ಟ್ ಸಮಿತಿಯಲ್ಲಿ ವಿದ್ವಾಂಸರೊಬ್ಬರೂ ಇಲ್ಲ.


8- ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ,ಪವಿತ್ರ ಖುರ್ಆನಿನ ಸೂಕ್ತಗಳನ್ನು ತಪ್ಪಾಗಿ ನೀಡಲಾಗಿದೆ. ,ಪ್ರವಾದಿ ವಚನಗಳಲ್ಲ್ಲೂಗಂಭೀರವಾದ ತಪ್ಪುಗಳಿವೆ. ಕರ್ಮಶಾಸ್ತ್ರ ನಿಯಮಗಳು, ಚರಿತ್ರೆ, ಹೀಗೆ ಹಲವಾರು ವಿಷಯಗಳಲ್ಲಿ  ಡಝನ್ ಗಟ್ಟಲೆ ತಪ್ಪುಗಳು, ಹಾಗು ಕುಂದು ಕೊರತೆಗಳು ವ್ಯಾಪಕವಾಗಿದೆ.


ಸಭೆಯಲ್ಲಿ SMO ಇದರ ನಾಯಕರು ಕಾರ್ಯಕರ್ತರು, ವಿದ್ಯಾರ್ಥಿಗಳ ರಕ್ಷಕರು, ಪೋಷಕರು ಉಪಸ್ಥಿತರಿದ್ದರು.



Comments

Popular posts from this blog

ಉಳ್ಳಾಲದ ಅಳೇಕಲ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿಸಲಾಯಿತು.

ಉಳ್ಳಾಲದ ಉಸ್ತಾದರುಗಳು