ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ತಂಗಳ್ ರವರ ದುವಾಶೀರ್ವಾದದೊಂದಿಗೆ ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ ಉಳ್ಳಾಲ ದರ್ಗಾ ಬಳಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿನ ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಉಳ್ಳಾಲ ಖಾಝಿಯನ್ನು ಧಿಕ್ಕರಿಸಿ ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರ ತಂದ ಪಠ್ಯಪುಸ್ತಕವನ್ನು ಕೆಲವು ಮೊಹಲ್ಲಾಗಳಿಗೆ ದಬ್ಬಾಳಿಕೆಯಿಂದ ವಿತರಿಸಿದ್ದು ಉಳ್ಳಾಲದಲ್ಲಿ ಗಲಭೆ ಭುಗಿಲೇಳಲು ನಿಮಿತ್ತವಾಗಿದ್ದು ಮಾತ್ರವಲ್ಲ ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ ಡಝನ್ ಗಟ್ಟಲೆ ತಪ್ಪುಗಳು, ಆಶಯ ವ್ಯತ್ಯಾಸಗಳು ಹಾಗು ಕುಂದು ಕೊರತೆಗಳು ವ್ಯಾಪಕವಾಗಿದ್ದು ಉಳ್ಳಾಲ ಸುನ್ನೀ ನಾಗರಿಕರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಬಹು PSM ಶಿಹಾಬುದ್ದೀನ್ ಸಖಾಫಿ ಮಾತನಾಡಿ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಎಳೆ ಎಳೆಯಾಗಿ ಉಳ್ಳಾಲ ಸುನ್ನಿ ನಾಗರಿಕರಿಗೆ, ವಿದ್ಯಾರ್ಥಿಗಳ ರಕ್ಷಕರಿಗೆ ಬಿಡಿಸಿ ಹೇಳಿದರು. ಇದೀಗ ಅಧಿಕ ಮೊಹಲ್ಲಾಗಳಲ್ಲೂ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಮರ್ಹೂಮ್ ಇಬ್ರಾಹಿಂ ಹಾಜಿ ಹಾಗು ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿಸಿಕೊಂ...